ಕಳಿಲೆ

ಬಿದಿರಿನ ಮೊಳಕೆ. ಬಲು ಮೃದುವಾಗಿಯೂ ಕೋಮಲವಾಗಿಯೂ ಇದೆಯಾಗಿ ಮೇಲೋಗರಗಳನ್ನು ಮಾಡುತ್ತಾರಲ್ಲದೆ ಉಪ್ಪಿನಕಾಯಿ ಹಾಕಲೂ ಬಳಸುತ್ತಾರೆ. ವಿಷಪೂರಿತವಾದ ಒಂದು ಬಗೆಯ ಗ್ಲೂಕೊಸೈಡ್ ಇರುವುದರಿಂದ ಶುದ್ಧಿ ಮಾಡದೆ ನೇರವಾಗಿ ಹಾಗೆಯೇ ಇದನ್ನು ಬಳಸುವ ಪದ್ಧತಿ ಇಲ್ಲ. ಮೊದಲು ಇದನ್ನು ನೀರಿನಲ್ಲಿ ನೆನೆಸಿ, (3-4) ದಿವಸಗಳ ಕಾಲ ಬಿಟ್ಟು, ಆ ನೀರನ್ನೆಲ್ಲ ಚೆಲ್ಲಿ, ಬೇರೆ ಶುದ್ಧವಾದ ನೀರಿನಲ್ಲಿ ಕುದಿಸಿದಾಗ ಇದರಲ್ಲಿನ ವಿಷಯುಕ್ತ ಗ್ಲೂಕೊಸೈಡ್ ಜಲವಿಶ್ಲೇಷಿತವಾಗಿ (ಹೈಡ್ರಾಲಿಸಿಸ್) ಹೈಡ್ರೊಸಯನಿಕ್ ಆಮ್ಲ ಮತ್ತು ಬೆಂeóÉೂೀಯಿಕ್ ಆಮ್ಲಗಳಾಗಿ ಪರಿವರ್ತಿತವಾಗುತ್ತದೆ. ಇವೂ ವಿಷಪೂರಿತವಾದ್ದಿರಿಂದ ಕಳಿಲೆ ಕುದಿಸಿ ಉಳಿಯುವ ನೀರನ್ನು ಚೆಲ್ಲಿಬಿಡಬೇಕು.

ಕಳಿಲೆ ಉಪ್ಪಿನಕಾಯಿ ಜೀರ್ಣಕಾರಿ; ಹಸಿವನ್ನುಂಟುಮಾಡುತ್ತದೆ. ಅಲ್ಲದೆ ಕಳಿಲೆ ಬೆಚ್ಚಾರ (ಪೋಲ್ಟೀಸು) ವ್ರಣಗಳಲ್ಲಿನ ಕ್ರಿಮಿನಾಶಕವೂ ಹೌದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ